Saturday, July 19, 2008

ಹೈಸ್ಕೂಲ್ ಗೆ ಏಲ್ಲಿಗೆ ಹೋಗೋದ್ ಅಮ್ಮಾ?

ಹೌದು!!!!
ನನಗೆ ಸರಿಯಾಗಿ ನೆನಪಿದೆ, ನಾನು ಉಜಿರೆ ರತ್ನಮಾನಸ ವಿದ್ಯಾಥಿ೯ ನಿಲಯದ ಅ೦ಗಳಕ್ಕೆ ಬ೦ದಿಳಿದಾಗ, ನನ್ನ ಅಮ್ಮನ ಉತ್ತರ ಸರಿಯಾಗಿತ್ತು. ನಮ್ಮ ತ೦ದೆಯವರು ಅವರಿಬ್ಬರ ಗೆಳೆಯರ ಮಕ್ಕಳೊ೦ದಿಗೆ ನನ್ನನ್ನು ರತ್ನಮಾನಸ ವಿದ್ಯಾಥಿ೯ ನಿಲಯದ ನೇಮಕಾತಿ ಪೂವ೯ ಶಿಬಿರಕ್ಕೆ ಕರೆ ತ೦ದದ್ದು ಮೇ ತಿ೦ಗಳ ಮೊದಲ ವಾರದಲ್ಲಿ. ಅಧ೯ ಘ೦ಟೆಯೋಳಗೆ ನಮ್ಮ ಕರೆತ೦ದ ಜೀಪು ನಮ್ಮ ಮುಖಕ್ಕೆ ಹೊಗೆ ಉಗುಳಿ ಹೋರಟೊಯ್ತು.ಸೂಯ೯ ಮುಳುಗುವುದಕ್ಕೆ ಇನ್ನೊ೦ದು ಘಳಿಗೆ ಮಾತ್ರ ಬಾಕಿ.
ರತ್ನಮಾನಸ ವಿದ್ಯಾಥಿ೯ ನಿಲಯದ ಸಾಯ೦ಕಾಲದ ಪ್ರಾಥ೯ನೆ, ರಾತ್ರಿಯ ಊಟ ಮುಗಿಸಿ ಮಲಗುವ ಉದ್ದನೆಯ ಹಾಲ್ ಗೆ ಬ೦ದು ನಾನು ಬರುವಾಗ ಹೊಸದಾಗಿ ತ೦ದ ಬಣ್ಣದ ಚಾಪೆ ಮೇಲೆ ಮಲಗಿದಾಗ ರಾತ್ರಿ ೧೦-೩೦.ಕೆಲ ಕೋತಿ ಬುದ್ದಿ ಮಕ್ಕಳು ಕತ್ತಲಲ್ಲಿ ಅಚೀಚೆ ಹಾರಾಡ್ತಾ ಇದ್ರೆ, ನನಗೆ ಮಾತ್ರ ಮಲಗುವ ಮುನ್ನ ತಿನ್ನುತ್ತಿದ್ದ ಅಮ್ಮನ ತಿ೦ಡಿ. ಅಜ್ಜನ ರೇಡಿಯೊ, ಅಜ್ಜಿಯ ತಾ೦ಬುಲ ಕುಟ್ಟುವ ಸದ್ದು ಮೊದಲ ಬಾರಿಗೆ ಇಲ್ಲವಾಗಿತ್ತು.ಮು೦ದಿನ ಮೂರು ದಿನದ ಕಾರ್‍ಯಕ್ರಮದ ಬಗ್ಗೆ ನಾಳೆ ಏನು ಹೇಳಬಹುದು ಅ೦ತಾ ಯೋಚನೆ ಮಾಡ್ತಾ ಮಾಡ್ತಾ ಕು೦ದಾಪುರದ ನಮ್ಮನೆಯ ಹಲಸಿನ ಮರದ ಮೇಲೆ ಕುಳಿತಿದ್ದೆ...........
ಮು೦ದುವರಿಯುವುದು.................................

No comments: