Tuesday, September 2, 2008

ಕತ್ತಲಲ್ಲಿ ಹಾರಿದನು ಹನುಮಂತ.........

ಆತ್ತ ನಿದ್ದೆಗಣ್ಣು, ಇತ್ತ ಸಮಯದ ಪಾಲನೆ ಮಾಡಲೇಬೇಕಾದ ಸಂಕಷ್ಟ, ಒಮ್ಮೆಲೆ ಇನ್ನೊರು ಜನ ಓಂ ಸೂರ್ಯಾಯ ನಮಃ ಎಂದಾಗ ನಾನು ಇನ್ನು ಸಹ ಟಾಯ್ಲಟ್ಟಲ್ಲಿ ನಿದ್ದೆ ಮಾಡ್ತಾ ಇದ್ದೆ.
ಹೌದು, ಆ ಕಡೆಯಲ್ಲಿ ನಿಗದಿತ ಸಮಯದಲ್ಲಿ ಯೋಗಾಸನ ಆರಂಭವಾಗಿ ಸೂರ್ಯ ನಮಸ್ಕಾರ ಶುರುವಾಗಿತ್ತು. ತಡವಾಗಿ ಯೋಗಾ ಕ್ಲಾಸಿಗೆ ಹೋಗುವಂತಿಲ್ಲ, ಹೋಗದೆ ಇದ್ದದ್ದನ್ನು ಯಾರಾದರು ನೋಡಿದ್ರೆ ಮರ್ಯಾದೆ ಹೋಗುತ್ತೆ, ನಿಧಾನವಾಗಿ ಟಾಯ್ಲಟ್ ಬಾಗಿಲು ತೆಗೆದು ನೋಡಿದೆ, ಯಾರಾದರು ಇದ್ದಾರ ಅಂತಾ, ಪುಣ್ಯಕ್ಕೆ ಹೊರಗಿನೆ ವಿದ್ಯುತ್ ಬಲ್ಬ್ ಬಿಟ್ರೆ ಇನ್ನೆಂತದೂ ಇರಲಿಲ್ಲ, ನಿಧಾನವಾಗಿ ಲೈಟ್ ಆಫ್ ಮಾಡಿ, ಬೆಳಿಗ್ಗಿನ 5.30 ರ ಕತ್ತಲಲ್ಲಿ ಹಾರಿದನು ಹನುಮಂತ............

ರೂಮೋಳಗೆ ಹೋಗುವ ಹಾಗಿಲ್ಲ, ಯೋಗಾಸನಕ್ಕೂ ಸೇರ್ಕೋಳ್ಳೋಕ್ಕೆ ಆಗೋಲ್ಲ, ನಾನೊಂದು ಊಪಾಯ ಮಾಡಿದೆ...........ಯೋಗಾಸನ ಹಾಲ್ ಎದುರುಗಡೆಯ ಹೂ ಗಿಡದ ಮರೆಯಲ್ಲಿ ಬಕ ಪಕ್ಷಿಯಂತೆ ಕಾದಿದ್ದೆ....ಯಾವಾಗ ಯೋಗಾಸನ ಮುಗಿಸಿ ಹುಡುಗರು ಹಾಲಿನಿಂದ ಹೊರಗೆ ಬಂದ್ರೊ, ಆವಾಗ ನಾನು ಅವರೋಟ್ಟಿಗೆ ಗುಂಪಿನಲ್ಲಿ ಗೋವಿಂದ..................

ಈ ಸಾಹಸ ನಾನು ತರಭೇತಿ ವಿದ್ಯಾಥಿ೯ಯಾಗಿದ್ದರಿಂದ ಮಾತ್ರ ಸಾಧ್ಯವಾಯ್ತು, ನಿಲಯದ ಖಾಯಂ ವಿದ್ಯಾಥಿ೯ಗಳು ತಪ್ಪಿಸಿಕೊಂಡರೆ ಸುಲಭವಾಗಿ ವಾಡ೯ನ್ ಕೈಯಲ್ಲಿ ಸಿಕ್ಕಿ ಬೀಳ್ತಾರೆ....ಕಾರಣ ಅಲ್ಲಿನ ವ್ಯವಸ್ಥೆ ಅಷ್ಟೇ ವ್ಯವಸ್ಥಿತವಾಗಿತ್ತು........

ಮುಂದಿನ ಮೂರು ದಿನಗಳ ಅಯ್ಕೆ ಮುಗಿದು, ಒಂದು ತಿಂಗಳ ನಂತರ ನಮ್ಮನೆಗೆ ಅಂಚೆ ಕಾಡ್೯ ಬಂದಾಗ ನಾನು ಮಾತಿಲ್ಲದವನಾಗಿದ್ದೆ..........ಮತ್ತದೆ ರತ್ನಮಾನಸದ ಹಸಿ ಹಸಿ ನೆನಪು...ನಮ್ಮಮ್ಮ ಮಾಳಿಗೆ ಮೇಲಿನ ಒಂದು ಹಳೇ ಸೂಟ್ ಕೇಸ್ ತೆಗೆದು ತೊಳೆದು ಬಿಸಿಲಲ್ಲಿ ಒಣಗಿಸಿದ್ದು ನೋಡ್ತಾ ಕುಳಿತಿದ್ದೆ,... ಎಷ್ಟು ಬೇಗ ನೀರಿನ ಪಸೆ ಬಿಸಿಲಿನ ರಾಪಿಗೆ ಒಣಗಿ ಹೋಗುತ್ತೆ ಅಲ್ವಾ???

ಅ ಹೊತ್ತಿಗೆ ನಾನು ಸೂಟ್ ಕೇಸ್ ಅಗಿ, ರತ್ನಮಾನಸ ಬಿಸಿಲಾಗಿ, ನನ್ನ ಅಮೂಲ್ಯಬಾಲ್ಯ ನೀರಿನ ಪಸೆಯಾಗಿ ಆವಿಯಾಗಿ ಹೋಗ್ತಾ ಇದ್ರೆ, 12 ವಷ೯ದ ನಾನು ರಜೆಯಲ್ಲಿ ಸೈಕಲ್ ಟಯರ್‍ ಓಡಿಸುವ ಕನಸು ಕಾಣ್ತಾ ಇದ್ದೆ!!!!!

ಏನೇ ಆಗಲಿ, ನನ್ನ ಜೀವನಕ್ಕೊಂದು ಸುಂದರ ಬುನಾದಿ ಹಾಕಿಸಿದ ರತ್ನಮಾನಸದ ಅನುಭಗಳನ್ನು, ನನ್ನ ಈಗಿನ ಕಾರ್ಪೋರೇಟ್ ಕಂಪನಿಯ ವಾತಾವರಣಕ್ಕೆ ಹೊಂದಿಸಿ ಮುಂದಿನ ಬ್ಲಾಗಿನಲ್ಲಿ ಬರೀತೀನಿ....

No comments: