Sunday, September 14, 2008

''Employee Introduction Programe'' Vs ನನ್ನ ಹಾಸ್ಟೆಲ್ ನ ಮೊದಲನೆ ದಿನ

ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಾನು ರತ್ನಮಾನಸದ ಎಂಟನೇ ತರಗತಿ ಸೇರಿಕೊಂಡಿದ್ದೆ. ಮೊನ್ನೆ ಮೊನ್ನೆ ಆಮೀರ್ ಖಾನ್ ನ ತಾರೆ ಜಮೀನ್ ಪರ್ ನೋಡಿದಾಗ, ನಾನು ಆ ಹುಡುಗನ ಪಾತ್ರದಲ್ಲಿ ಹನ್ನೇರಡು ವಷ೯ಗಳ ಹಿಂದೆ ಉಜಿರೆಯ ರತ್ನಮಾನಸದ ಅಂಗಳದಲ್ಲಿ ಹೆತ್ತವರು ನನ್ನ ಬಿಟ್ಟು ಹೋರಟು ನಿಂತಾಗ ನಾನು ಅಳುತ್ತ ಒಳಗೋಡಿದ್ದ ನೆನಪು ಮಾತ್ರ ಮತ್ತೆ ಮತ್ತೆ ಬರುತ್ತದೆ.


ಮಾರನೆ ದಿನ ಜೂನ್ ಒಂದನೇ ತಾರೀಕು, ಶಾಲಾ ದಿನದ ಮೊದಲನೆ ದಿನ. ಬೆಳಿಗ್ಗೆ ಐದು ಘಂಟೆಗೆ ಬೆಲ್ ಬಾರಿಸಿದಾಗ, ನಾವೆಲ್ಲರು ಮಲಗಿದ್ದ ಹಾಲ್ ಗಳಲ್ಲಿ ಬೆಳ್ಳಂಬೆಳಕು, ಹುಡುಗರೆಲ್ಲಾ ತರಾತುರಿಯಾಗಿ ಬ್ರೇಷ್ ಹಿಡ್ಕೊಂಡು ಹೋರಗಡೆ ಹಲ್ಲುಜ್ಜಲು ಹೋಗ್ತಾ ಇದ್ರೆ, ನಾನು ಮಾತ್ರ ಚಾಪೆಯಲ್ಲಿ ಕುಳಿತು, ನನ್ನನ್ನು ಹಾಸ್ಟೆಲ್ ಕಳಿಸುವ ಐಡಿಯಾ ನಮ್ಮನೆಯಲ್ಲಿ ಯಾರದ್ದಿರ ಬಹುದೆಂದು ಯೋಚಿಸುತ್ತಿದ್ದೆ.


ಒಂದು ಕುರಿ ಮತ್ತೊಂದು ಕರಿಯನ್ನು ಹಿಂಬಾಲಿಸಿದಂತೆ ನಾನು ಕೂಡ, ಜೂನ್ ತಿಂಗಳ ಪಿರಿಪಿರಿ ಮಳೆಯಲ್ಲಿ ಬಾವಿಕಟ್ಟೆಯಲ್ಲಿ ಹಲ್ಲುಜ್ಜಿ ಪ್ರಾಥ೯ನಾ ಹಾಲ್ ಗೆ ಸಮಯಕ್ಕೆ ಸರಿಯಾಗಿ ಬಂದಿದ್ದೆ. ಆ ದಿನದ ಮಟ್ಟಿಗೆ ಎಂಟನೇ ತರಗತಿಯವರ ಮಟ್ಟಿಗೆ ಹಾಸ್ಟೆಲ್ ನ ಎಲ್ಲಾ ವಿಷಯಗಳು ಹೊಸತು. ಹಿರಿಯ ವಿದ್ಯಾಥಿ೯ಗಳು ಮಾಡುವ ಯೋಗಾಸನವನ್ನು ಕುಳಿತು ವೀಕ್ಷಣೆ ಮಾಡಿ, ಮುಂದಿನ ದಿನಗಳಲ್ಲಿ ನಾವು ಅಭ್ಯಾಸ ಮಾಡಬೇಕಾಗಿತ್ತು. ನಮ್ಮನ್ನು ಯೋಗಾಸನದಿಂದ ಹಿಡಿದು ಅಡುಗೆ ಮಾಡಿ ಬಡಿಸುವವರೆಗಿನ ತರಭೇತುಗೊಳಿಸುವುದು ಹಿರಿಯ ವಿದ್ಯಾಥಿ೯ಗಳ ಜವಾಬ್ಧಾರಿಯಾಗಿತ್ತು. ಜೀವನ ಶಿಕ್ಷಣದ ಮೊದಲನೆ ದಿನ ಆರಂಭವಾಗಿತ್ತು.


ನಾನೀಗ ಕೆಲಸ ಮಾಡುತ್ತಿರುವ ಕಾಪೋ೯ರೇಟ್ ಕಂಪನಿಗಳ ನೀತಿಗೂ, ಎಂಟನೇ ತರಗತಿಯ ರತ್ನಮಾನಸದ ದಿನಚರಿ ಮತ್ತು, ಕೆಲಸ ನಿರ್ವಹಿಸುವ ಕ್ರಮಕ್ಕೂ ಬಹಳ ಸಾಮ್ಯೆತೆ ಇದೆ. ಉದಾಹರಣೆಗೆ ಕಾಪೋ೯ರೇಟ್ ಕಂಪನಿಗಳಲ್ಲಿ ಹೊಸ ಉದ್ಯೋಗಿಗಳನ್ನು ''Employee Introduction Programe'' ಮೂಲಕ ಕಂಪನಿಯ ರೀತಿ, ನೀತಿಗಳನ್ನು ಪರಿಚಯಿಸಿದರೆ, ಅದೇ ರತ್ನಮಾನಸದಲ್ಲಿ, ಅದು ಹಿರಿಯ ವಿದ್ಯಾಥಿ೯ಗಳ ಮಟ್ಟಿಗೆ ವಸತಿ ಪಾಲಕರ ನಿದೇ೯ಶನದಲ್ಲಿ ಕಿರಿಯ ವಿದ್ಯಾಥಿ೯ಗಳನ್ನು ನೋಡಿ, ಮಾಡಿ, ಕಲಿತುಕೊಳ್ಳುವಂತೆ ತರಭೇತುಗೊಳಿಸುವುದು ಜೀವನ ಶಿಕ್ಷಣದ ಭಾಗವಾಗಿತ್ತು. ಎಲ್ಲಿಯೂ ಕೂಡ ಕಿರಿಯ ವಿದ್ಯಾಥಿ೯ಗಳಿಗೆ ಮಾಹಿತಿಯ ಕೊರತೆ ಇರಲಿಲ್ಲ. ಯಾಕೆಂದರೆ ರತ್ನಮಾನಸದ ದಿನಚರಿ ಅಲ್ಲಿನ ವಿದ್ಯಾಥಿ೯ಗಳ ಜೀವನ ಕ್ರಮವಾಗಿತ್ತು.ವಸತಿ ಪಾಲಕರುಗಳ ಅನಪಸ್ಥಿತಿಯಲ್ಲೂ ಕರಾರುವಕ್ಕಾಗಿ ವಿದ್ಯಾಥಿ೯ ನಿಲಯ ಕಾರ್ಯನಿವ೯ಹಿಸುತ್ತಿತ್ತು. ಕಾರಣ ಸಿಂಪಲ್ Rathnamanasa is a Process Oriented Hostel, not a warden/Person oriented Hostel.


''Employee Introduction Programe'' ಗಳು ಕೆಲವು ಕಂಪನಿಗಳಲ್ಲಿ ಹೊಸ ಉದ್ಯೋಗಿಗಳ ಮಟ್ಟಿಗೆ ಹನಿಮೂನ್ ಇದ್ದ ಹಾಗೆ.ಮ್ಯಾನೇಜರು ಗಳ ಅನಪಸ್ಥಿತಿ ಕೆಲವರಿಗೆ ಹಬ್ಬವಾದರೆ, ಕೆಲವರಿಗೆ ದಪ೯ ತೋರಿಸುವ ಅವಕಾಶ. ಕಂಪನಿಯ ಆ ದಿನದ ವ್ಯವಹಾರದ ಮಟ್ಟಿಗೆ ಸ್ವಲ್ಪ ಹಿನ್ನಡೆ. Most of the companies are trying to implement process orient business, instead of person oriented business.


ಕಾಪೋ೯ರೇಟ್ ಕಂಪನಿಗಳು ತನ್ನ ಕಂಪನಿಯ ಪಾಲಿಸಿಗಳನ್ನು ವಿದ್ಯಾವಂತ ಉದ್ಯೋಗಿಗಳಲ್ಲಿ ಒದ್ದಾಡಿಕೊಂಡು ಕಷ್ಟಪಟ್ಟು ಅಳವಡಿಸಿದರೆ, ರತ್ನಮಾನಸದಲ್ಲಿ ಅದು ಸಹಜ ಪ್ರಕ್ರೀಯೆ, ಅಷ್ಟೇ ವ್ಯತ್ಯಾಸ!!!


ಮ್ಯಾನೇಜ್ ಮೆಂಟ್ ಕಂಪನಿಗಳಿಗೆ ರತ್ನಮಾನಸ ಅಧ್ಯಯನ ಯೋಗ್ಯ ಸಂಸ್ಥೆ, ಯಾವುದೋ ಅಧಿಕಾರಿಯ ಅಚ್ಚುಕಟ್ಟು ಕೆಲಸ ತನ್ನದೆಂದು ಹೇಳಿಕೋಳ್ಳುವ ಲಾಲು ಭಾಷಣ ಕೇಳುವ ಬದಲು, ಕಾಪೋ೯ರೇಟ್ ಕಂಪನಿಗಳೇ, ನಿಮ್ಮ ಉದ್ಯೋಗಿಗಳನ್ನು, ರತ್ನಮಾನಸಕ್ಕೋಮ್ಮೆ ಕರೆದುಕೊಂಡು ಹೋಗಿ.


ಮುಂದಿನ ಬ್ಲಾಗಿನಲ್ಲಿ, ಕಾಪೋ೯ರೇಟ್ ಕಂಪನಿಗಳ ''right place, right job, right person'' policy ಮತ್ತು ಅದೇ ವಿಷಯದಲ್ಲಿ ರತ್ನಮಾನಸದ method ಬಗ್ಗೆ ಬರೀತೆನೆ....

1 comment:

Anonymous said...

itlaayi yenta barilE illa